ನಮಸ್ಕಾರ ಓದುಗರೇ ....
ಮೊನ್ನೆಯ ಬರವಣಿಗೆಯಲ್ಲಿ ದನದ ಬಗ್ಗೆ ಬರೆದಿರುವೆ. ಈಗ ಅದರ ಮುಂದುವೊರೆದ ಭಾಗವನ್ನು ಬರೆಯಲಿರುವೆ. ನಮ್ಮ ದೇಶದ ಹಲವಾರು ಒಳ್ಳೆ ಒಳ್ಳೆಯ ದನದ ತಳಿಗಳು ಇವೆ. ಆದರೆ ಅವುಗಳ ಹಾಲಿನ ಇಳುವರಿ ಕಮ್ಮಿ. ನಾವು ಹೈನುಗಾರಿಕೆಯಲ್ಲಿ ಉತ್ತಮವಾದ ಲಾಭ ಪಡೆಯಬೇಕಾದರೆ ನಾವು ವಿದೇಶಿ ತಳಿಗಳಿಂದ ಮಿಶ್ರ ತಳಿ ಪಡೆಯಬೇಕು. ಇದಕ್ಕೆ ನಮ್ಮ ಸರಕಾರದ ಬೇಕಾದ ಪ್ರೋಸ್ತಾಹವನ್ನು ಒದಗಿಸುತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯ ಕೇಂದ್ರವನ್ನು ಸಂಪರ್ಕಿಸಿ.
ಈಗ ನಾನು ಈ ಮಿಶ್ರ ತಳಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ಕೊಡುತ್ತೇನೆ.
೧.ಹೋಲ್-ಸ್ಟೀನ್ ಫ್ರೀಸಿಯನ್ (ಹೆಚ್. ಫ್) ಅಂತ ನಾವು ಕರೆಯುತ್ತೇವೆ. ಮೂಲ ಸ್ಥಾನ ಹಾಲೆಂಡ್ ದೇಶ. ದೊಡ್ಡ ಗಾತ್ರದ ಕಪ್ಪು ಮತ್ತು ಬಿಳಿ ಬಣ್ಣದ ತಳಿ. ಮುಖ ಉದ್ದವಾಗಿ ಮತ್ತು ನೇರವಾಗಿ ಇರುತ್ತದೆ ಇದರ ಹೋರಿಯ ವೀರ್ಯ ವನ್ನು ಉಪಯೋಗಿಸಿ ನಾವು ಮಿಶ್ರ ತಳಿಯನ್ನು ಪಡೆಯಬಹುದು.
ಇದು ಉತ್ತಮ ಹಾಲು ಕೊಡುತ್ತದೆ . ಆದರೆ ಹಾಲಿನಲ್ಲಿ ಬೆಣ್ಣೆ ಅಂಶ ಕಡಿಮೆ( ಅಂಶ ಶೇ. ೩.೫) .
ಸರಾಸರಿ ಒಂದು ಸೋಲಿಗೆ 3000 ದಿಂದ ೬೦೦೦ ಲೀಟರ್
ಹಾಲು ಉತ್ಪಾದನೆ ಮಾಡಬಹುದು.
ಆದರೆ ಈ ದನದ ನಿರ್ವಹಣೆ ತುಂಬಾ ಎಚ್ಚರಿಕೆ ಇಂದ ಮಾಡಬೇಕು . ಹಟ್ಟಿಯ ಸ್ವಚ್ಛತೆ ಸರಿಯಾಗಿ ಮಾಡದೇ ಇದ್ದ ಪಕ್ಷದಲ್ಲಿ ಇದಕ್ಕೆ ಕೆಚ್ಚಲು ಭಾವು ಬರುವ ಸಾದ್ಯತೆ ಹೆಚ್ಚು .
೨.ಜೆರ್ಸಿ ಇದರ ಮೂಲ ಇಂಗ್ಲಂಡ್ . ಇದು ಒಳ್ಳೆಯ ರೋಗ ನಿರೋದಕ ಶಕ್ತಿಯನ್ನು ಹೊಂದಿದ ತಳಿಯಾಗಿದೆ. ಸಣ್ಣ ಗಾತ್ರದ ಮಾಸಲು ಕೆಂಪಿನಿಂದ ಕಪ್ಪು ಬಣ್ಣದ ತಳಿಯಾಗಿದೆ. ಇದಕ್ಕೆ ಹಳದಿ ಬಣ್ಣದ ಕೊಂಬು ಇದ್ದು, ಕೊಂಬಿನ ತುದಿ ಕಪ್ಪಾಗಿರುತ್ತದೆ. ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದೆ ಅಂದರೆ (ಶೇ. ೫.೫) ಇದೆ .ಸರಾಸರಿಯಾಗಿ ೧ ಸೋಲಿನಲ್ಲಿ 2000 ದಿಂದ 4000 ಲೀಟರ್ ಹಾಲು ಉತ್ಪಾದನೆ ಮಾಡಬಹುದು .ಉತ್ತಮ ತಳಿಯಾಗಿದೆ.
No comments:
Post a Comment