Wednesday, 31 October 2012

ಕರುಗಳ ಸಾಕಣಿಕೆಯಿಂದ ಉಳಿತಾಯ


ನಮಸ್ತೆ.....
ಇಂದಿನ ವಿಷಯ ಪುನಃ ಹೈನುಗಾರಿಕೆಯ ಬಗ್ಗೆ ಬರೆಯುತಿರುವೆ.
ಈ ಕಳಗಟ್ಟದಲ್ಲಿ ಜೀವನ ನಡೆಸುದಕ್ಕೆ  ಉಳಿತಾಯ ಎಂಬುದು ಮುಖ್ಯವಾದ ವಿಷಯವಾಗಿದೆ .ಏಕೆಂದರೆ ಮುಂದಿನ ನಮ್ಮ ಜೀವನವನ್ನು  ಈ ಉಳಿತಯದಿಂದಲೇ ಯಾರದೇ  ಹಂಗಿರದೆ ಬದುಕಬಹುದು . ಇದೇನಪ್ಪ ? ಇವಾ ಇಸ್ಟ್ ದಿನ ಕೃಷಿ , ಹೈನುಗಾರಿಕೆ ಬರೆಯುತಿದ್ದವ ಇವತ್ ಏನ್ ಎಲ್ ಐ ಸಿ ಏಜೆಂಟ್ ಆದ್ನ ಅಂತ ತಿಳಿಯುದ್ ಬೇಡ .
ನಾನ್ ಈ ಹೈನುಗಾರಿಕೆಯಲ್ಲೇ ಒಳ್ಳೆಯಾ ಉಳಿತಾಯದ ಬಗ್ಗೆ ಬರೆಯಲಿರುವೆ.



     ನಮ್ಮ ಮನೆಯಲ್ಲಿ ೨ ವರ್ಷದ ಹಿಂದೇ  ನಮ್ಮ ಹೆಚ್ . ಎಫ್  ತಳಿಯ (ಲಿಂಗಮ್ಮ ಎನ್ನುವ ) ಹಸು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಅದನ್ನು ನಾವು ಒಳ್ಳೆಯ ಆರೈಕೆ ಮಾಡಿ ಸಾಕಿದ್ದೆವು. ಮೊನ್ನೆ ನಮ್ಮ ಮನೆಗೆ ಕೆ .ಎಂ .ಎಫ್ . ಅಧಿಕಾರಿಗಳು ಬಂದಿದ್ದರು . ಅವರು ನಮ್ಮ  ಹೆಚ್ . ಎಫ್  ತಳಿಯ ಕರುವನ್ನು  ಕಂಡು ಸಂತೋಷ ಗೊಂಡು ೪೫೦೦೦ ಬೆಲೆ ಕಟ್ಟಿದರು .ಅವಾಗಲೇ ನಮಗೆ ತಿಳಿಯಿತು ನಾವು ೪೫೦೦೦ ಉಳಿತಾಯ ಮಾಡಿದೆವು ಎಂದು .
     ಪ್ರಿಯ ಹೈನುಗಾರರೆ ನೀವು ದಯಮಾಡಿ ನಿಮ್ಮಲಿರುವ ಹಸುಗಳ ಕರುವನ್ನು ಉತ್ತಮ ರೀತಿಯಲ್ಲಿ ಸಾಕಿ ಅದರ ಸದುಪಯೋಗ ಪಡೆದುಕೊಳ್ಳ ಬೇಕು.
 ಬರಿ ಕರುಗಲ್ಲನ್ನು ತಂದು ಸಾಕಿದರೆ ನಮಗೆ ಹೆಚ್ಚಿಗೆ ಹೊರೆ ಆಗಬಹುದು . ಆದರೆ ಹೈನುಗಾರಿಕೆ ಮಾಡುತ್ತ ಅದರಲ್ಲಿ ಬಂದ ಸಲ್ಪ ಲಾಭವನ್ನು ಕರುಗಳ ಸಾಕಾಣಿಕೆಗೆ ಬಳಸಿದರೆ ನಮಗೆ ಕರು ಸಾಕಿದ ಖರ್ಚು ಸಮಸ್ಯೆ ಆಗುವುದಿಲ್ಲ.
ನಮ್ಮ ಡೈರಿಯನ್ನು ಅಭಿವೃದ್ಧಿ ಮಾಡಬಹುದಾಗಿದೆ.  ಒಂದು ಕರು ಗರ್ಭ ಧರಿಸುವ ಹಂತದವರೆಗೆ ಸಾಕಲು  20ರಿಂದ 30 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಉತ್ತಮವಾಗಿ ಕಾಲಕಾಲಕ್ಕೆ ಸರಿಯಾದ ಲಸಿಕೆ ಮಾಡುತ್ತ ಉತ್ತಮವಾದ ಆಹಾರದ ಜೊತೆ ಲವಣ ಮಿಶ್ರಣ ಮತ್ತು ಹಸಿಹುಲ್ಲನ್ನು ಕೊಡಬೇಕು.
        ಕರುಗಳನ್ನು ಉತ್ತಮವಾಗಿ ಪೋಷಿಸಿದರೆ ಒಂದೂವರೆ ವರ್ಷಕ್ಕೆ ಗರ್ಭ ಧರಿಸುವ ಹಂತಕ್ಕೆ ಬರುತ್ತವೆ. ಎರಡು ವರ್ಷ ಮೂರು ತಿಂಗಳ ವೇಳೆಗೆ ಕರು ಹಾಕುತ್ತವೆ. ಪ್ರಾಯಕ್ಕೆ ಕರುಗಳಿಗೆ ವಿದೇಶಿ ತಳಿಯ ಹೋರಿಗಳಿಂದ ಗರ್ಭ ಧರಿಸುವಂತೆ ಮಾಡಿ ಉತ್ತಮ ತಳಿಯ ಕರುಗಳನ್ನು ಪಡೆಯಬಹುದು. ಅಥವಾ ಗರ್ಭದ ಸಮಯದಲ್ಲಿ ೪೫ ರಿಂದ ೬೦ ಸಾವಿರದ ವರೆಗೆ ಮಾರಬಹುದಾಗಿದೆ.ಆರಂಭದಲ್ಲಿ ಕರು ಸಾಕಣೆಗೆ ಹಾಕುವ ಬಂಡವಾಳ ಸ್ಥಿರವಾದರೂ ನಂತರದ ದಿನಗಳಲ್ಲಿ ಉತ್ತಮ ಆದಾಯ ಪಡೆಯಬಹುದು.
ಕರುಗಳ ಸಾಕಾಣಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯುವೆ .
ಈ ಲೇಖನದ ಬಗ್ಗೆ ದಯವಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು  ತಿಳಿಸಿ ಹಾಗೂ ಸಲಹೆಗಳನ್ನು ನೀಡಿ.

Wednesday, 24 October 2012

ವಿದೇಶಿ ದನದ ತಳಿಗಳು


ನಮಸ್ಕಾರ ಓದುಗರೇ ....
ಮೊನ್ನೆಯ ಬರವಣಿಗೆಯಲ್ಲಿ ದನದ ಬಗ್ಗೆ ಬರೆದಿರುವೆ. ಈಗ ಅದರ ಮುಂದುವೊರೆದ ಭಾಗವನ್ನು ಬರೆಯಲಿರುವೆ. ನಮ್ಮ ದೇಶದ ಹಲವಾರು ಒಳ್ಳೆ ಒಳ್ಳೆಯ ದನದ ತಳಿಗಳು ಇವೆ. ಆದರೆ ಅವುಗಳ ಹಾಲಿನ ಇಳುವರಿ ಕಮ್ಮಿ. ನಾವು ಹೈನುಗಾರಿಕೆಯಲ್ಲಿ ಉತ್ತಮವಾದ ಲಾಭ ಪಡೆಯಬೇಕಾದರೆ ನಾವು ವಿದೇಶಿ ತಳಿಗಳಿಂದ ಮಿಶ್ರ ತಳಿ ಪಡೆಯಬೇಕು. ಇದಕ್ಕೆ ನಮ್ಮ ಸರಕಾರದ ಬೇಕಾದ  ಪ್ರೋಸ್ತಾಹವನ್ನು ಒದಗಿಸುತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯ  ಕೇಂದ್ರವನ್ನು ಸಂಪರ್ಕಿಸಿ.


ಈಗ ನಾನು ಈ ಮಿಶ್ರ ತಳಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ಕೊಡುತ್ತೇನೆ.
 
.ಹೋಲ್-ಸ್ಟೀನ್ ಫ್ರೀಸಿಯನ್ (ಹೆಚ್. ಫ್) ಅಂತ ನಾವು ಕರೆಯುತ್ತೇವೆ. ಮೂಲ ಸ್ಥಾನ ಹಾಲೆಂಡ್ ದೇಶ. ದೊಡ್ಡ ಗಾತ್ರದ ಕಪ್ಪು ಮತ್ತು ಬಿಳಿ ಬಣ್ಣದ ತಳಿ. ಮುಖ ಉದ್ದವಾಗಿ ಮತ್ತು ನೇರವಾಗಿ ಇರುತ್ತದೆ ಇದರ ಹೋರಿಯ ವೀರ್ಯ ವನ್ನು ಉಪಯೋಗಿಸಿ ನಾವು ಮಿಶ್ರ ತಳಿಯನ್ನು ಪಡೆಯಬಹುದು.
ಇದು ಉತ್ತಮ ಹಾಲು ಕೊಡುತ್ತದೆ . ಆದರೆ ಹಾಲಿನಲ್ಲಿ ಬೆಣ್ಣೆ ಅಂಶ ಕಡಿಮೆ( ಅಂಶ ಶೇ. ೩.೫) .
ಸರಾಸರಿ ಒಂದು ಸೋಲಿಗೆ 3000 ದಿಂದ ೬೦೦೦ ಲೀಟರ್
 ಹಾಲು ಉತ್ಪಾದನೆ ಮಾಡಬಹುದು.


 
 ಆದರೆ ಈ ದನದ ನಿರ್ವಹಣೆ ತುಂಬಾ ಎಚ್ಚರಿಕೆ ಇಂದ ಮಾಡಬೇಕು . ಹಟ್ಟಿಯ ಸ್ವಚ್ಛತೆ ಸರಿಯಾಗಿ ಮಾಡದೇ ಇದ್ದ ಪಕ್ಷದಲ್ಲಿ  ಇದಕ್ಕೆ ಕೆಚ್ಚಲು ಭಾವು ಬರುವ ಸಾದ್ಯತೆ ಹೆಚ್ಚು .









೨.ಜೆರ್ಸಿ ಇದರ ಮೂಲ ಇಂಗ್ಲಂಡ್ . ಇದು ಒಳ್ಳೆಯ ರೋಗ ನಿರೋದಕ ಶಕ್ತಿಯನ್ನು ಹೊಂದಿದ ತಳಿಯಾಗಿದೆ.      ಸಣ್ಣ ಗಾತ್ರದ ಮಾಸಲು ಕೆಂಪಿನಿಂದ ಕಪ್ಪು ಬಣ್ಣದ ತಳಿಯಾಗಿದೆ. ಇದಕ್ಕೆ ಹಳದಿ ಬಣ್ಣದ ಕೊಂಬು ಇದ್ದು, ಕೊಂಬಿನ ತುದಿ ಕಪ್ಪಾಗಿರುತ್ತದೆ. ಹಾಲಿನಲ್ಲಿ ಕೊಬ್ಬಿನ ಅಂಶ  ಹೆಚ್ಚಾಗಿದೆ ಅಂದರೆ (ಶೇ. ೫.೫)  ಇದೆ .ಸರಾಸರಿಯಾಗಿ ೧ ಸೋಲಿನಲ್ಲಿ 2000 ದಿಂದ 4000 ಲೀಟರ್ ಹಾಲು  ಉತ್ಪಾದನೆ ಮಾಡಬಹುದು .ಉತ್ತಮ ತಳಿಯಾಗಿದೆ.









About Me & another new local news blog read http://gangollikoogu.blogspot.in/