ಭತ್ತದ ನಾಟಿ ಯಂತ್ರ
ಇಂದು ನಾನು ಭತ್ತ ನಾಟಿ ಯಂತ್ರದ ಬಗ್ಗೆ ಬರೆಯುತಿರುವೆ..
ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವುದು ಅತ್ಯಂತ ಶ್ರಮದ ಕೆಲಸ. ಕೆಸರು ಗದ್ದೆಗಳನ್ನು ಮಾಡಿಕೊಳ್ಳುವುದರಿಂದ ಹಿಡಿದು ಕೊಯ್ಲು ಮಾಡಿ ಭತ್ತ ಮನೆಗೆ ತರುವವರೆಗೆ ಪ್ರತಿಯೊಂದು ಕೆಲಸಕ್ಕೂ ಆಳುಗಳು ಬೇಕು. ಸಮಯಕ್ಕೆ ಸರಿಯಾಗಿ ಆಳುಗಳನ್ನು ಹೊಂದಿಸಿಕೊಂಡು ಕೆಲಸ ಮಾಡಬೇಕು. ಸಕಾಲದಲ್ಲಿ ಆಳುಗಳು ಸಿಕ್ಕದಿದ್ದರೆ ‘ಭತ್ತದ ಸಹವಾಸ ಬೇಡವೇ ಬೇಡ’ ಎಂಬ ಹತಾಶ ಸ್ಥಿತಿಗೆ ರೈತರು ಬಂದು ಬಿಡುತ್ತಾರೆ.
ನಮ್ಮ ದಕ್ಶಿನ ಕನ್ನದ ಮತ್ತು ಉಡುಪಿ ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆ. ಹೆಚ್ಚು ಕೂಲಿ ಕೊಡುತ್ತೇವೆ ಎಂಬ ಆಸೆ ತೋರಿದರೂ ಭತ್ತ ನಾಟಿಗೆ ಜನರು ಸಿಕ್ಕುವುದಿಲ್ಲ. ಕಾರ್ಮಿಕರ ಕೊರತೆ ಇರುವ ಈ ಸಂದರ್ಭದಲ್ಲಿ ಭತ್ತದ ಪೈರು ನಾಟಿಗೆ ಯಂತ್ರಗಳು ಬಂದಿವೆ. ಕೆಲ ಯಂತ್ರಗಳು ಗದ್ದೆಗೆ ಇಳಿದು ನಾಟಿ ಮಾಡುತ್ತಿವೆ.
ಆದರೆ ನಮ್ಮ ಕರಾವಳಿಯಲ್ಲಿ ಚಿಕ್ಕ ಚಿಕ್ಕ ಗದ್ದೆಗಳು. ಈ ಯಂತ್ರ ದೊಡ್ಡ ದೊಡ್ಡ ಗದ್ದೆಗಳಿಗೆ ಎಂಬತ್ತು ಆಳುಗಳು ಮಾಡಬಹುದಾದ ನಾಟಿ ಕೆಲಸವನ್ನು ಒಂದು ಯಂತ್ರ ಮಾಡುತ್ತದೆ. ದಿನಕ್ಕೆ 4 ಎಕರೆಯಲ್ಲಿ ನಾಟಿ ಮಾಡುವ ಸಾಮರ್ಥ್ಯ ಅದಕ್ಕಿದೆ. ಮೂರು ಗಂಟೆ ಅವಧಿಯಲ್ಲಿ, ಮೂರು ಲೀಟರ್ ಡೀಸೆಲ್ ಬಳಸಿಕೊಂಡು ಯಂತ್ರದ ಸಹಾಯದಿಂದ ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಗದ್ದೆಯಲ್ಲಿ ನೀರು ಕಡಿಮೆ ಇದ್ದರೆ ಯಂತ್ರ ಸಲೀಸಾಗಿ ಗದ್ದೆಯಲ್ಲಿ ಓಡಾಡಿ ನಾಟಿ ಮಾಡುತ್ತದೆಯಂತ ಕೃಷಿ ಅದಿಕಾರಿಗಳಲ್ಲಿ ಕೇಳಿ ಮಾಹಿತಿ ನೀಡಿರುತ್ತಾರೆ.
ನಾಟಿ ವಿಧಾನ: ಯಂತ್ರದ ಮೂಲಕ ಪೈರು ನಾಟಿ ಮಾಡಲು ಕೃತಕ ಸಸಿ ಮಡಿ ತಯಾರಿಕೆ ಬಹು ಮುಖ್ಯ. ಗದ್ದೆಗಳಲ್ಲಿ (ಮನೆಯ ಅಂಗಲವೂ ನಡೆಯುತ್ತದೆ) ಒಂದು ಮೀಟರ್ ಅಗಲದ,10 ಮೀ. ಉದ್ದದ ಪ್ಲಾಸ್ಟಿಕ್ ಹಾಳೆ ಹರಡಿ ಅದರ ಮೇಲೆ ಗೊಬ್ಬರ ಮಿಶ್ರಿತ ಮಣ್ಣನ್ನು 2 ಇಂಚು ದಪ್ಪ ಹರಡಬೇಕು. ಮಣ್ಣಿನಲ್ಲಿ ಕಲ್ಲುಗಳಿರಬಾರದು. ಒಂದು ದಿನದ ಮೊಳಕೆಬಂದ ಭತ್ತದ ಬೀಜಗಳನ್ನು ಅದರ ಮೇಲೆ ಬಿತ್ತಬೇಕು. 18ರಿಂದ 20ದಿನಗಳಲ್ಲಿ ಪೈರು ನಾಟಿಗೆ ಸಿದ್ಧವಾಗುತ್ತದೆ. ಎಕರೆಗೆ 15ರಿಂದ 20ಕೆ.ಜಿ. ಬಿತ್ತನೆ ಬೀಜ ಬೇಕು. ಸಸಿ ಮಡಿ ತಯಾರಿಕೆಗೆ ಹೆಚ್ಚು ಜಾಗ ಬೇಕಿಲ್ಲ. ಸಮಾನ ಆಳ, ಅಂತರಕ್ಕೆ ನಾಟಿ ಮಾಡುವುದರಿಂದ ಪೈರು ಚೆನ್ನಾಗಿ ತೆಂಡೆ ಒಡೆಯುತ್ತದೆ. ಕಳೆ ತೆಗೆಯಲು ಯಂತ್ರ ಬಳಸಬಹುದು. ಖರ್ಚು ಕಡಿಮೆಯಾಗುತ್ತದೆ.
15 ಎಚ್‌ಪಿ ಸಾಮರ್ಥ್ಯದ ಪವರ್ ಟಿಲ್ಲರ್ ಮಾದರಿಯ ನಾಟಿ ಯಂತ್ರದ ಬೆಲೆ 1.64 ಲಕ್ಷ ರೂ. ರೈತರು 87.300 ರೂ ಪಾವತಿಸಿದರೆ ಕೃಷಿ ಇಲಾಖೆ ಯಂತ್ರ ಖರೀದಿಗೆ 77.500ರೂ ಸಬ್ಸಿಡಿ ನೀಡುತ್ತದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು. ಇದರಿಂದ ಯುವ ರೈತರು ಬರಪೂರ ಲಾಭವನ್ನು ಪಡೆಯಬಹುದಾಗಿದೆ.
ಭತ್ತ ನಾಟಿ ಯಂತ್ರ ಖರೀದಿಸಿರುವ ಕೆಲವು ತಮ್ಮ ಗದ್ದೆಯಲ್ಲಿ ನಾಟಿ ಮಾಡಿ ಮುಗಿಸಿದ ನಂತರ ಯಂತ್ರವನ್ನು ಇತರ ರೈತರಿಗೆ ಬಾಡಿಗೆ ಆಧಾರದ ಮೇಲೆ ಕೊಡುತ್ತಾರೆ. ಗಂಟೆಗೆ 800-1000 ಸಾವಿರ ರೂ ಬಾಡಿಗೆ.