Sunday, 8 February 2015

ಹೈನುಗಾರಿಕೆಯ ಬಗ್ಗೆ ಮಾಹಿತಿ

"ಹೈನುಗಾರಿಕೆ”...
ಮನುಷ್ಯನಿಗೆ ಹುಟ್ಟಿದ ಕೂಡಲೆ ಮೊದಲ ಆಹಾರ ತಾಯಿಯ ಎದೆಹಾಲು. ನಂತರದ್ದು ಹಸುವಿನಹಾಲು. ಹಾಗೆಯೇ ಸಸ್ಯಗಳಿಗೂ ಕೂಡ ಮೊದಲ ಆಹಾರ ಬೀಜದಲ್ಲಿಯೇ ಇದ್ದರೆ ನಂತರದ್ದು ಕಳಿತ ಗೊಬ್ಬರ ಅಥವಾ ಹೆಚ್ಚಿನಾಂಶ ಗೊಬ್ಬರ ಮಿಶ್ರಿತ ಮಣ್ಣು. ಆದ್ದರಿಂದ ಸಮರ್ಪಕ ಬದುಕಿನ ಸಮಗ್ರ ಕೃಷಿಗೆ ಪಶುಸಂಗೋಪನೆ ಅವಿಭಾಜ್ಯ ಅಂಗ.
ಹೈನುಗಾರಿಕೆ 
ಹೈನುಗಾರಿಕೆ ನಾನು ಮಾಡುತ್ತೇನೆಂದು, ದನ ಖರೀದಿಸಲು ಹೋದರೆ ದನ ಮಾರುವವರು ಮಂಕುಬೂದಿ ಎರೆಚುವವರೆ ಹೆಚ್ಚು. ಅದ್ದರಿಂದ ದನ ಖರೀದಿಸುವ ಮುಂಚೆ ಹತ್ತಿರದ ಪಶುವೈದ್ಯರನ್ನು ವಿಚಾರಿಸುವುದು ಉತ್ತಮ.

ಹೈನುಗಾರಿಕೆಗೆ ಹಸುವನ್ನು ಖರೀದಿಸಬೇಕಾದರೆ, ಆರೋಗ್ಯಪೂರ್ಣ, ಉತ್ತಮವಾದ ಹಸುವನ್ನು ಖರೀದಿಸಬೇಕು. ಅದು ಹೇಗೆ?

)ಕಣ್ಣುಗಳು ಹೊಳಪಿನಿಂದ ಕೂಡಿರಬೇಕು.
)ಮಝಲ್ ಅಂದರೆ, (ಮೂಗಿನ ಸೊಳ್ಳಿ) 
ಮೂಗಿನ ಭಾಗ ಬೆವರುತ್ತಿರಬೇಕು.
)ಸರಿಯಾಗಿ ಕಿವಿ ಆಡಿಸುತ್ತಿರಬೇಕು. ಮತ್ತು ಯಾರದರು ಅಪರಿಚಿತರು ಕಂಡಾಗ ಕತ್ತನ್ನು ಎತ್ತಿ ಕಿವಿಯಲ್ಲಿ ಆಲಿಸುತ್ತ ಆಶ್ಚರ್ಯಚಕಿತ ರೀತಿಯಲ್ಲಿ ನೋಡಬೇಕು.
)ಕುತ್ತಿಗೆ ಭಾಗದ ಚರ್ಮ ಬಹಳ ನರಿಗೆಯಿಂದ ಕೂಡಿರಬಾರದು.
)ನಾಲ್ಕೂ ಕೆಚ್ಚಲು ಸಮನಾಗಿರಬೇಕು.
)ಹೊಟ್ಟೆಯ ಅಡಿಭಾಗದಲ್ಲಿ ಗೋಚರಿಸುವ ದೊಡ್ಡದಾದ ನರಗಳು ಒಂದು ರೀತಿಯ ಸ್ಪ್ರಿಂಗ್ ನಂತಿರಬೇಕು.
)ಹಸು ಆಹಾರ ತಿಂದ ನಂತರ ಸರಿಯಾಗಿ ಅಂದರೆ ಸಮಾಧಾನವಾಗಿ ಮೆಲುಕು ಮಾಡಬೇಕು

....  ರೀತಿಯಾಗಿ ಜನಸಾಮಾನ್ಯರು ಉತ್ತಮವಾದ ಹಸುವನ್ನು ಆರಿಸಬಹುದು ಎಂಬುದು ಕೆಲವು ಅನುಭವಿಗಳ ಮಾತು.
ಪಶುಗಳಿಗೆ ಆಹಾರಪದ್ದತಿ......
ಯಾವುದೆ ಜೀವಿಗೆ ಸಮತೋಲನ ಆಹಾರ ಯಾವತ್ತೂ ದೊರಕಿದಲ್ಲಿ, ಬಹುತೇಕವಾಗಿ ಅನಾರೋಗ್ಯದ ಸಮಸ್ಯೆ ಇರುವದಿಲ್ಲ.! ಹಾಗಾದರೆ ಪಶುಗಳಿಗೆ ಸಮತೋಲನ ಆಹಾರ ಹೇಗೆ?
)ಒಣಹುಲ್ಲು- ಇದು ಪಶುಗಳಿಗೆ ನಾರಿನಾಂಶ ಇರುವ ಆಹಾರ. ಇಲ್ಲಿ ಭತ್ತದ ಹುಲ್ಲು, ರಾಗಿ ಹುಲ್ಲು, ಕರಡ ಇತ್ಯದಿಗಳನ್ನು ಉಪಯೋಗಿಸಬಹುದು.
)ಹಸಿರು ಹುಲ್ಲು- ಇದು ಅರ್ಧ ಪರಿಪೂರ್ಣ ಆಹಾರ... ಇಲ್ಲಿ ಹೈಬ್ರೀಡ್ ನೆಪಿಯರ್ ಗ್ರಾಸ್ ಗಳು ಉತ್ತಮ. ಏಕೆಂದರೆ ಬೆಳೆಯುವದು ಸುಲಭ ಮತ್ತು ಕಡಿಮೆ ಜಾಗದಲ್ಲಿ ಬೆಳೆಯಬಹುದು. ಅವೆಂದರೆ,  ಜಿ ಎಫ್ ಆರ್ - ಮತ್ತು ..., ಡಿ ಹೆಚ್ ಎನ್-.. , ಸಿ - ಮತ್ತು ..., ಗಿನಿ..., ಪ್ಯಾರಾ.,ನಮ್ಮ ಗದ್ದೆಯಲ್ಲಿ  ಸಲ ನಮ್ಮ ಡಾ/ ಅರುನ್ ಅವರು ಕೊಟ್ಟ ಆಫ಼ಿಕನ್ ಟಾಲ್ ಯೆನ್ನುವ ಹುಲ್ಲನ್ನು ಬೆಳೆಸಿದ್ದಿವು . ಉತ್ತಮ ಹುಲ್ಲು ಸಿಕ್ಕಿರುತ್ತದೆ.
)ದ್ವಿದಳ ಮೇವುಇದು ಇನ್ನುಳಿದ ಅರ್ಧ ಪರಿಪೂರ್ಣ ಆಹಾರಇಲ್ಲಿ ಕುದುರೆ ಮಸಾಲೆಸ್ಟೈಲೊ , ಹಾಗೂ ಸುಬಾಬುಲ್ , ಕ್ಯಾಲಂಡ್ರಿಯಾ 
ಇತ್ಯಾದಿಗಳನ್ನು ಬಳಸಬಹುದು.
   
ಕೆಲವು ಹಳ್ಳಿಗಳಲ್ಲಿ ಬಾಳೆಯ ಮರವನ್ನು ಬೇಸಿಗೆಯ ದಿನದಲ್ಲಿ ಕೊಚ್ಚಿ ಹಾಕುವ ರೂಡಿ ಇದೆ. ಇದರಲ್ಲಿ ಸತ್ವಕ್ಕಿಂತ ನೀರಿನಂಶವೇ ಜಾಸ್ತಿ.. 
ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿನ ಪ್ರಯೋಜನವಾದೀತು. ಹಾಗೆ ಹಾಕುವದಾದಲ್ಲಿ ಮರದ ಒಳಗಿನ ದಿಂಡಿನ ಭಾಗವನ್ನು ಹಾಕಬಾರದು.
ಇಲ್ಲಿ ನಾನು ಹಸಿರು ಹುಲ್ಲಿನ ಜೊತೆ ದ್ವಿದಳ ಮೇವನ್ನು ಏಕೆ ಹೇಳುತ್ತೇನೆಂದರೆ, ನೆಪಿಯರ್ ನಲ್ಲಿ ಅಗ್ಜಲಿಕ್ ಆಮ್ಲದ ಪ್ರಮಾಣ ಸ್ವಲ್ಪ ಜಾಸ್ತಿ ಇರುವದರಿಂದ ಪಶುಗಳಿಗೆ ವಯಸ್ಸಾದಂತೆ ಕ್ಯಾಲ್ಸಿಯಂ ಪ್ರಮಾಣದ ಕೊರತೆ ಕಾಣಬಹುದು ಆದ್ದರಿಂದ ದ್ವಿದಳಧಾನ್ಯದ ತೌಡು ಅಥವಾ ದ್ವಿದಳ ಮೇವನ್ನು ಉಪಯೋಗಿಸುವದು ಉತ್ತಮ. ಹಾಗೆಯೆ ಅಜೋಲಾವನ್ನುಉಪಯೋಗಿಸುವವರು ಬೆಳಿಗ್ಗೆ ಸಂಜೆ ತಲಾ೨೦೦ಗ್ರಾಂ ತಿನ್ನಲು 
ಕೊಡ ಬೇಕು. ಆಹಾರ ಸರಿಯಾಗಿ ಪಚನವಾಗುತ್ತದೆ. ಅಲ್ಲದೆ ಹಾಲಿನ ಇಳುವರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ.

ಒಟ್ಟಿನಲ್ಲಿ ಹೇಳುವದಾದರೆ, ತಿನ್ನುವಷ್ಟು ಸ್ವಲ್ಪ ಹೆಚ್ಚುಕಡಿಮೆ ಸಮ ಪ್ರಮಾಣದಲ್ಲಿ, ಹಸಿರು ಹುಲ್ಲು+ದ್ವಿದಳ ಮೇವು, ಹಾಗು ಒಂದೆರಡು ಶಿವುಡು ಒಣಹುಲ್ಲು ಅಥವಾ ಕರಡ ಇದು ಪಶುಗಳಿಗೆ ದಿನನಿತ್ಯದ ಪರಿಪೂರ್ಣ ಆಹಾರ.  ರೀತಿ ಅಹಾರ ಕೊಟ್ಟಲ್ಲಿ ರೆಡಿಮೇಡ್ ಪಶು ಆಹಾರದ(ಹಿಂಡಿಯ) ಅಗತ್ಯತೆ ಇಲ್ಲ. ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಹತ್ತಿರದ ಪಶುವೈಧ್ಯರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದು.

ಪಶುಸಂಗೋಪನೆ ಮಾಡುವವರು ಕನಿಷ್ಟ ಆರು ತಿಂಗಳಿಗೊಮ್ಮೆಯಾದರು, ಪಶು ವೈದ್ಯರನ್ನು ಸಂಪರ್ಕಿಸಿ ಅಗತ್ಯವಾಗಿ ಕೆಲವು ರೋಗ ಪ್ರತಿರೋಧಕ ಔಷಧಗಳನ್ನು ಹಾಕಿಸಬೇಕು ಹಾಗೆಯೆ, ರೆಡಿಮಿಕ್ಸ್ ಪಶುಆಹಾರವನ್ನು ಹಾಕಲೇಬೇಕೆಂದರೆ ಅದನ್ನು ಕೂಡ ನಾವೇ ತಯಾರಿಸಿಕೊಳ್ಳುವುದು ಉತ್ತಮ. ಒಬ್ಬ ತಜ್ಞ ವೈದ್ಯರು ತಿಳಿಸಿರುವುದು  ರೀತಿ ಇದೆ.
ಒಂದು ಕ್ವಿಂಟೆಲ್ ಪಶು ಆಹಾರ ತಯಾರಿಸಲು () ಗೋಧಿ ಬೂಸ ೭೦ ಕೆ ಜಿ. () ಉದ್ದಿನ ತೌಡು ೨೦ ಕೆ ಜಿ. () ರಾಗಿ ಹುಡಿ  ಕೆ ಜಿ. () ಕಡಲೆ ತೌಡು  ಕೆ ಜಿ. (ನಾನು ಮೇಲೆ ತಿಳಿಸಿದಂತೆ ಪರಿಪೂರ್ಣ ಸಮತೊಲನ ಆಹಾರ ಉಪಯೋಗಿಸಿದರೆ ರೆಡಿಮಿಕ್ಸ್ ಪಶು ಆಹಾರದ ಅವಶ್ಯಕತೆ ಇಲ್ಲ
ಆದರೆ ಯಾರೂ ಕೂಡ ಸಮತೋಲನ ಆಹಾರ ತಯಾರಿಸುವುದಿಲ್ಲ ಬದಲಿಗೆ  KMF ನಿಂದ OK ತಂದು ಹಾಕುತ್ತಾರೆ.)

ಹೀಗೆ ಹೈನುಗಾರಿಕೆ ಬಗ್ಗೆ ನನಗೆ ತಿಳಿದ ಕೆಲವು ಪ್ರಾಥಮಿಕ ಮಾಹಿತಿಯನ್ನು ನಿಮಗೆ ತಿಳಿಸಿದ್ದೇನೆ. ಇನ್ನುಳಿದಂತೆ ಕೆಲವು ರೀತಿಯಲ್ಲಿ, ಉತ್ತಮಗೊಬ್ಬರ ತಯಾರಿಕೆ, ಕಗು ಪಶು ಉಪ ಉತ್ಪನ್ನಗಳಿಂದ ಕೆಲವು ಕೃಷಿಗೆ ಸಂಬಂಧಿಸಿದ ಔಷಧ ತಯಾರಿಕೆ ಬಗ್ಗೆ ನನಗೆ ಗೊತ್ತಿರುವ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನಿಮಗೆ ತಿಳಿಸುತ್ತೇನೆ.
                                                 Contact mobile 9964827445
                  


Wednesday, 31 October 2012

ಕರುಗಳ ಸಾಕಣಿಕೆಯಿಂದ ಉಳಿತಾಯ


ನಮಸ್ತೆ.....
ಇಂದಿನ ವಿಷಯ ಪುನಃ ಹೈನುಗಾರಿಕೆಯ ಬಗ್ಗೆ ಬರೆಯುತಿರುವೆ.
ಈ ಕಳಗಟ್ಟದಲ್ಲಿ ಜೀವನ ನಡೆಸುದಕ್ಕೆ  ಉಳಿತಾಯ ಎಂಬುದು ಮುಖ್ಯವಾದ ವಿಷಯವಾಗಿದೆ .ಏಕೆಂದರೆ ಮುಂದಿನ ನಮ್ಮ ಜೀವನವನ್ನು  ಈ ಉಳಿತಯದಿಂದಲೇ ಯಾರದೇ  ಹಂಗಿರದೆ ಬದುಕಬಹುದು . ಇದೇನಪ್ಪ ? ಇವಾ ಇಸ್ಟ್ ದಿನ ಕೃಷಿ , ಹೈನುಗಾರಿಕೆ ಬರೆಯುತಿದ್ದವ ಇವತ್ ಏನ್ ಎಲ್ ಐ ಸಿ ಏಜೆಂಟ್ ಆದ್ನ ಅಂತ ತಿಳಿಯುದ್ ಬೇಡ .
ನಾನ್ ಈ ಹೈನುಗಾರಿಕೆಯಲ್ಲೇ ಒಳ್ಳೆಯಾ ಉಳಿತಾಯದ ಬಗ್ಗೆ ಬರೆಯಲಿರುವೆ.



     ನಮ್ಮ ಮನೆಯಲ್ಲಿ ೨ ವರ್ಷದ ಹಿಂದೇ  ನಮ್ಮ ಹೆಚ್ . ಎಫ್  ತಳಿಯ (ಲಿಂಗಮ್ಮ ಎನ್ನುವ ) ಹಸು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿತ್ತು. ಅದನ್ನು ನಾವು ಒಳ್ಳೆಯ ಆರೈಕೆ ಮಾಡಿ ಸಾಕಿದ್ದೆವು. ಮೊನ್ನೆ ನಮ್ಮ ಮನೆಗೆ ಕೆ .ಎಂ .ಎಫ್ . ಅಧಿಕಾರಿಗಳು ಬಂದಿದ್ದರು . ಅವರು ನಮ್ಮ  ಹೆಚ್ . ಎಫ್  ತಳಿಯ ಕರುವನ್ನು  ಕಂಡು ಸಂತೋಷ ಗೊಂಡು ೪೫೦೦೦ ಬೆಲೆ ಕಟ್ಟಿದರು .ಅವಾಗಲೇ ನಮಗೆ ತಿಳಿಯಿತು ನಾವು ೪೫೦೦೦ ಉಳಿತಾಯ ಮಾಡಿದೆವು ಎಂದು .
     ಪ್ರಿಯ ಹೈನುಗಾರರೆ ನೀವು ದಯಮಾಡಿ ನಿಮ್ಮಲಿರುವ ಹಸುಗಳ ಕರುವನ್ನು ಉತ್ತಮ ರೀತಿಯಲ್ಲಿ ಸಾಕಿ ಅದರ ಸದುಪಯೋಗ ಪಡೆದುಕೊಳ್ಳ ಬೇಕು.
 ಬರಿ ಕರುಗಲ್ಲನ್ನು ತಂದು ಸಾಕಿದರೆ ನಮಗೆ ಹೆಚ್ಚಿಗೆ ಹೊರೆ ಆಗಬಹುದು . ಆದರೆ ಹೈನುಗಾರಿಕೆ ಮಾಡುತ್ತ ಅದರಲ್ಲಿ ಬಂದ ಸಲ್ಪ ಲಾಭವನ್ನು ಕರುಗಳ ಸಾಕಾಣಿಕೆಗೆ ಬಳಸಿದರೆ ನಮಗೆ ಕರು ಸಾಕಿದ ಖರ್ಚು ಸಮಸ್ಯೆ ಆಗುವುದಿಲ್ಲ.
ನಮ್ಮ ಡೈರಿಯನ್ನು ಅಭಿವೃದ್ಧಿ ಮಾಡಬಹುದಾಗಿದೆ.  ಒಂದು ಕರು ಗರ್ಭ ಧರಿಸುವ ಹಂತದವರೆಗೆ ಸಾಕಲು  20ರಿಂದ 30 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಉತ್ತಮವಾಗಿ ಕಾಲಕಾಲಕ್ಕೆ ಸರಿಯಾದ ಲಸಿಕೆ ಮಾಡುತ್ತ ಉತ್ತಮವಾದ ಆಹಾರದ ಜೊತೆ ಲವಣ ಮಿಶ್ರಣ ಮತ್ತು ಹಸಿಹುಲ್ಲನ್ನು ಕೊಡಬೇಕು.
        ಕರುಗಳನ್ನು ಉತ್ತಮವಾಗಿ ಪೋಷಿಸಿದರೆ ಒಂದೂವರೆ ವರ್ಷಕ್ಕೆ ಗರ್ಭ ಧರಿಸುವ ಹಂತಕ್ಕೆ ಬರುತ್ತವೆ. ಎರಡು ವರ್ಷ ಮೂರು ತಿಂಗಳ ವೇಳೆಗೆ ಕರು ಹಾಕುತ್ತವೆ. ಪ್ರಾಯಕ್ಕೆ ಕರುಗಳಿಗೆ ವಿದೇಶಿ ತಳಿಯ ಹೋರಿಗಳಿಂದ ಗರ್ಭ ಧರಿಸುವಂತೆ ಮಾಡಿ ಉತ್ತಮ ತಳಿಯ ಕರುಗಳನ್ನು ಪಡೆಯಬಹುದು. ಅಥವಾ ಗರ್ಭದ ಸಮಯದಲ್ಲಿ ೪೫ ರಿಂದ ೬೦ ಸಾವಿರದ ವರೆಗೆ ಮಾರಬಹುದಾಗಿದೆ.ಆರಂಭದಲ್ಲಿ ಕರು ಸಾಕಣೆಗೆ ಹಾಕುವ ಬಂಡವಾಳ ಸ್ಥಿರವಾದರೂ ನಂತರದ ದಿನಗಳಲ್ಲಿ ಉತ್ತಮ ಆದಾಯ ಪಡೆಯಬಹುದು.
ಕರುಗಳ ಸಾಕಾಣಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯುವೆ .
ಈ ಲೇಖನದ ಬಗ್ಗೆ ದಯವಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು  ತಿಳಿಸಿ ಹಾಗೂ ಸಲಹೆಗಳನ್ನು ನೀಡಿ.

About Me & another new local news blog read http://gangollikoogu.blogspot.in/